ಸಿದ್ಧಗಂಗಾ ಮಠದ ಹಿರಿಯ ಶ್ರೀ ಡಾ.ಶಿವಕುಮಾರಸ್ವಾಮೀಜಿಯವರು ಏ.1ರಂದು 111ನೇ ವರ್ಷಕ್ಕೆ ಕಾಲಿಡುತ್ತಿದ್ದು, ಜಿಲ್ಲೆಯಾದ್ಯಂತ ಭಕ್ತರು ಶ್ರೀಗಳ ಜನ್ಮದಿನೋತ್ಸವವನ್ನು ಭಕ್ತಿ ವೈಭವದಿಂದ ಆಚರಿಸುತ್ತಿದ್ದಾರೆ.
ಸಿದ್ಧಗಂಗಾ ಮಠದಲ್ಲಿ ನಡೆಯಲಿರುವ ಶ್ರೀಗಳ ಜನ್ಮದಿನೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಮಠದ ಆವರಣ ಭಕ್ತರಿಂದ ತುಂಬಿಕೊಂಡಿದೆ. ಮಠದ ಆವರಣದಲ್ಲಿ ನಿರ್ಮಿಸಲಾಗಿರುವ ವೇದಿಕೆಯಲ್ಲಿ ಬೆಳಗ್ಗೆ 10.30ರಿಂದ ಶ್ರೀಗಳು ಭಕ್ತರಿಗೆ ದರ್ಶನ ನೀಡಲಿದ್ದು, ಪಾದಪೂಜೆ ಹಾಗೂ ಜನ್ಮದಿನೋತ್ಸವ ಅದೇ ವೇದಿಕೆಯಲ್ಲಿ ನಡೆಯಲಿದೆ. ಭಕ್ತರು ಸರತಿಯಲ್ಲಿ ಬಂದು ಶ್ರೀಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆಯಲು ಬ್ಯಾರಿಕೇಡ್ಗಳನ್ನು ಅಳವಡಿಸಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ.
ದೂರದೂರುಗಳಿಂದ ಭಕ್ತರು ಆಗಮಿಸುತ್ತಿರುವ ಭಕ್ತರಿಗೆ ಬೆಳಗ್ಗೆಯಿಂದಲೇ ದಾಸೋಹ ಆರಂಭವಾಗಿದೆ. ಖಾರಬಾತ್, ಕಾಫೀ, ಟೀ ವಿತರಣೆ ಮಾಡುತ್ತಿದ್ದು, 11.30ಕ್ಕೆ ಮಧ್ಯಾಹ್ನದ ಊಟ ಆರಂಭವಾಗಲಿದ್ದು, ರಾತ್ರಿ 12 ಗಂಟೆಯವರೆಗೂ ಮುಂದುವರಿಯಲಿದೆ. ಸುಮಾರು 1.5 ಲಕ್ಷಕ್ಕೂ ಅಧಿಕ ಭಕ್ತರು ಸೇರಲಿದ್ದು, 9 ಕಡೆಗಳಲ್ಲಿ ದಾಸೋಹದ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಕೌಂಟರ್ನಲ್ಲಿಯೂ ಟೇಬಲ್, ಚೇರು ಹಾಕಿ ಬಾಳೆ ಎಲೆಯಲ್ಲಿ ಊಟ ಬಡಿಸಲಾಗುತ್ತದೆ. ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಸೇರಿದಂತೆ ಭಕ್ತರಿಗೆ ಎಲ್ಲಾ ಬಗೆಯ ಮೂಲಸೌಕರ್ಯ ಒದಗಿಸಲಾಗಿದೆ.
ಮಠದ ಆವರಣದಲ್ಲಿ ಬೆಳಗ್ಗೆ ತುಮಕೂರಿನ ಕೆ.ಎಂ.ಲೋಕೇಶ್ವರ ಮತ್ತು ತಂಡದಿಂದ ಪಂಚವೀಣಾವಾದನ ಆರಂಭವಾಗಿದೆ. ಮಧ್ಯಾಹ್ನ 1 ಗಂಟೆಗೆ ಗಾಯಕ ರಾಜೇಶ್ ಕೃಷ್ಣನ್ರಿಂದ ಗಾನಮಾಧುರ್ಯ, ಸಂಜೆ 6.30ಕ್ಕೆ ಶ್ರೀಮಠದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಂದ ಬಸವ ಬೆಳಕು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.