Thursday, October 8, 2009

ಕನ್ನಡದ ಬಗ್ಗೆ ಕಿರು ಪರಿಚಯ

ಕನ್ನಡ
ಬಳಕೆಯಲ್ಲಿರುವ
ಪ್ರದೇಶಗಳು: ಕರ್ನಾಟಕ, ಭಾರತ
ಒಟ್ಟು
ಮಾತನಾಡುವವರು: ೫೫ ಮಿಲಿಯನ್ (೨೦೦೧)
ಶ್ರೇಯಾಂಕ: ೨೯
ಭಾಷಾ ಕುಟುಂಬ: ದ್ರಾವಿಡ ಭಾಷೆಗಳು
ದಕ್ಷಿಣ ದ್ರಾವಿಡ
ತಮಿಳು-ಕನ್ನಡ
ಕನ್ನಡ

ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ: ಕರ್ನಾಟಕ, ಭಾರತ
ನಿಯಂತ್ರಿಸುವ
ಪ್ರಾಧಿಕಾರ: ಕರ್ನಾಟಕ ಸರ್ಕಾರದ ಹಲವು ಸಂಸ್ಥೆಗಳು

ಭಾಷೆಯ ಸಂಕೇತಗಳು
ISO 639-1: kn
ISO 639-2: kan
ISO/FDIS 639-3: kan

ಕರ್ನಾಟಕದ ಜಲಪಾತಗಳು

ಕರ್ನಾಟಕ">ಕರ್ನಾಟಕ ರಾಜ್ಯವು ಹಲವಾರು ವಿಷಯಗಳಿಗೆ ಪ್ರಸಿದ್ಧವಾಗಿದೆ. ಪ್ರಕೃತಿ ಸೌಂದರ್ಯ ಅದರಲ್ಲಿ ಬಹು ಪ್ರಮುಖವಾದುದು. ಅದರಲ್ಲೂ ಜಲಪಾತಗಳ ವಿಷಯದಲ್ಲಿ ಕರ್ನಾಟಕ ಭಾರತದಲ್ಲಿಯೇ ಅಗ್ರಸ್ಥಾನದಲ್ಲಿದೆ ಎಂದು ತಿಳಿಯಲಾಗಿದೆ. ತನ್ನಲ್ಲಿರುವ ಹಲವಾರು ನಯನ ಮನೋಹರವಾದ ಜಲಪಾತಗಳಿಂದಾಗಿ ಕರ್ನಾಟಕವು ಜಗತ್ಪ್ರಸಿದ್ಧಿಯನ್ನು ಪಡೆದಿದೆ. ಕರ್ನಾಟಕ">ಕರ್ನಾಟಕದ ವಿವಿದ ಪ್ರದೇಶಗಳಲ್ಲಿ ಜಲಪಾತಗಳನ್ನು ಅಬ್ಬಿ, ಅಬ್ಬೆ, ಹೆಬ್ಬೆ, ದಬ್ಬೆ, ಜೋಗ ಎಂಬ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ.


ಕರ್ನಾಟಕ">ಕರ್ನಾಟಕ ರಾಜ್ಯದ ಬಹುಪಾಲು ಜಲಪಾತಗಳು ಕಂಡು ಬರುವುದು ಪಶ್ಚಿಮ ಘಟ್ಟ" class="mw-redirect">ಪಶ್ಚಿಮ ಘಟ್ಟಗಳ ಮಡಿಲಿನಲ್ಲಿ. ಕೊಡಗು">ಕೊಡಗಿನಿಂದ ಹಿಡಿದು ಉತ್ತರ ಕನ್ನಡ">ಉತ್ತರ ಕನ್ನಡದ ಅಂಚಿನವರೆಗೆ ಹರಡಿರುವ ಪಶ್ಚಿಮ ಘಟ್ಟಗಳು ದೊಡ್ಡ ಹಾಗೂ ಚಿಕ್ಕ ಪುಟ್ಟ ಜಲಪಾತಗಳನ್ನೂ ಸೇರಿ ಏನಿಲ್ಲವೆಂದರೂ ಸುಮಾರು ೫೦೦ ರ ಆಸು ಪಾಸು ಜಲಪಾತಗಳಿವೆ ಎಂದು ಅಂದಾಜು ಮಾಡಲಾಗಿದೆ.

ಅಬ್ಬಿ ಜಲಪಾತ

ಅಬ್ಬಿ ಜಲಪಾತ, ಮಡಿಕೇರಿ

ಅಬ್ಬಿ ಜಲಪಾತವು ಕೊಡಗು">ಕೊಡಗು ಜಿಲ್ಲೆಯ ಮುಖ್ಯ ಪಟ್ಟಣವಾದ ಮಡಿಕೇರಿಯಿಂದ ಕೇವಲ ೫ ಕಿ.ಮೀ. ದೂರದಲ್ಲಿದೆ. ಮಡಿಕೇರಿಯವರೆಗೆ ಬಸ್ ಸೌಕರ್ಯವಿದ್ದು ಅಲ್ಲಿಂದ ೫ ಕಿ.ಮೀ. ಯಾವುದೇ ಸ್ಥಳೀಯ ಖಾಸಗಿ ವಾಹನವನ್ನು ಹಿಡಿದು ಹೋಗಬಹುದು.ನಂತರ ಸುಮಾರು ೫೦೦ ಮೀ ನಷ್ಟು ಕಾಫಿ ತೋಟದ ಮಧ್ಯೆ ನಡೆದುಕೊಂಡು ಹೋದರೆ ಈ ಸುಂದರವಾದ ಜಲಪಾತ ಕಾಣಸಿಗುತ್ತದೆ. ಮಳೆಗಾಲದ ನಂತರದ ಅವಧಿಯಲ್ಲಿ ಹೋದರೆ ೧೦೭ ಅಡಿ ಎತ್ತರದಿಂದ ಮೈದುಂಬಿಕೊಂಡು ಧುಮುಕುವ ಜಲಪಾತದ ವೈಭವವನ್ನು ಸವಿಯಬಹುದು.

ಸಾತೊಡ್ಡಿ ಜಲಪಾತ

ಸಾತೊಡ್ಡಿ ಜಲಪಾತ, ಯಲ್ಲಾಪುರ


ಜೋಗ ಜಲಪಾತ" class="mw-redirect">ಜೋಗ ಜಲಪಾತ

ಜೋಗ ಜಲಪಾತ

ಜೋಗ ಅಥವ ಗೇರುಸೊಪ್ಪ ಜಲಪಾತ ಪ್ರಪಂಚದ ಪ್ರಸಿದ್ಧ ಜಲಪಾತಗಳಲ್ಲೊಂದು. ಶಿವಮೊಗ್ಗ">ಶಿವಮೊಗ್ಗ ಮತ್ತು ಉತ್ತರ ಕನ್ನಡ">ಉತ್ತರ ಕನ್ನಡ ಜಿಲ್ಲೆಗಳ ಗಡಿಯಲ್ಲಿರುವ ಜೋಗ ಭಾರತ">ಭಾರತದ ಅತಿ ಎತ್ತರದ ಜಲಪಾತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸುಮಾರು ೨೯೨ ಮೀಟರ್ ಎತ್ತರದಿಂದ ಶರಾವತಿ">ಶರಾವತಿ ನದಿಯು ರಾಜಾ, ರೋರರ್, ರಾಕೆಟ್ ಮತ್ತು ರಾಣಿ ಎಂಬ ನಾಲ್ಕು ಸೀಳುಗಲಾಗಿ ಇಲ್ಲಿ ಧುಮುಕುತ್ತೆದೆ.


ಬೈಂದೂರು">ಬೈಂದೂರು ಕೋಸಳ್ಳಿ ಜಲಪಾತ

ಕೋಸಳ್ಳಿ ಜಲಪಾತ
ಕೋಸಳ್ಳಿ ಜಲಪಾತ ಕೊನೆಯ ಹಂತ


ಕೋಸಳ್ಳಿ ಜಲಪಾತವು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರಿನಿಂದ ಸುಮಾರು 11 ಕಿ.ಮೀ ದೂರದಲ್ಲಿದೆ. ಬೈಂದೂರಿನಿಂದ ಶಿರೂರು ಮಾರ್ಗವಾಗಿ ಸುಮಾರು 7 ರಿಂದ 8 ಕಿ.ಮೀ ದೂರವಿರುವ ತೂದಳ್ಳಿಗೆ ಬಂದು ಅಲ್ಲಿಂದ ಸುಮಾರು 3 ಕಿ.ಮೀ ಕಾಡುಮಾರ್ಗದಲ್ಲಿ ನಡೆದು ಹೋದರೆ ಸಿಗುವುದೇ ಕೋಸಳ್ಳಿ ಜಲಪಾತ. ಕೋಸಳ್ಳಿ ಜಲಪಾತವು 3-5 ಹಂತಗಳಾಗಿ ಧುಮುಕುತ್ತದೆ.

  • ದೂರ: ಬೆಂಗಳೂರಿನಿಂದ ಸುಮಾರು 480 ಕಿ.ಮೀ. ಮಂಗಳೂರಿನಿಂದ 130 ಕಿ.ಮೀ
  • ಮಾರ್ಗ: ಮಂಗಳೂರು - ಗೋವಾ ರಾಷ್ಟ್ರೀಯ ಹೆದ್ದಾರಿ 17
  • ಸಮೀಪದ ಪಟ್ಟಣಗಳು: ಭಟ್ಕಳ, ಕುಂದಾಪುರ, ಉಡುಪಿ
  • ಸಮೀಪದ ಪ್ರಮುಖ ಆಕರ್ಷಣೆಗಳು: ಕೊಲ್ಲೂರು ಶ್ರೀ ಮುಕಾಂಬಿಕಾ ದೇವಸ್ಥಾನ (27ಕಿ.ಮೀ*), ಮುರ್ಡೇಶ್ವರ (30ಕಿ.ಮೀ*), ಉಡುಪಿ ಶ್ರೀ ಕೃಷ್ಣ ದೇವಸ್ಥಾನ (67ಕಿ.ಮೀ*)ಮರವಂತೆ ಕಡಲ ತೀರ (18ಕಿ.ಮೀ*), (*ಬೈಂದೂರಿನಿಂದ ಇರುವ ದೂರ)

ಕರ್ನಾಟಕದಲ್ಲಿರುವ ಪ್ರಮುಖವಾದ ಜಲಪಾತಗಳು

ಬಹುಭಾಷಾ ಪಂಡಿತ ಮಾಹುಲಿ ಗೋಪಾಲಾಚಾರ್ಯರು

ಪಂಡಿತರಾಜ, ಪಂಡಿತರತ್ನ, ಪಂಡಿತನಿಧಿ, ಶಾಸ್ತ್ರರತ್ನಾಕರ, ನ್ಯಾಯವೇದಾಂತವಿದ್ವಾನ್ ಮೊದಲಾದ ಬಿರುದುಗಳಿಂದ ಭೂಷಿತರಾದ, ಸಂಸ್ಕೃತ ಪಂಡಿತರ ತಾರಾಮಂಡಲದಲ್ಲಿ ರಾರಾಜಿಸುವ, ಮಾಹುಲಿ ಗೋಪಾಲಾಚಾರ್ಯರ ಜನ್ಮಶತಾಬ್ದಿಯನ್ನು ಮುಂಬಯಲ್ಲಿ ಆಚರಿಸಲಾಗುತ್ತಿದೆ. ಅಪ್ಪಟ ಕನ್ನಡಿಗರಾದ ಬಹುಭಾಷಾ ಪಂಡಿತರನ್ನು ಡಾ. 'ಜೀವಿ' ಕುಲಕರ್ಣಿ ಇಲ್ಲಿ ಪರಿಚಯಿಸಿದ್ದಾರೆ.

ಬೆಳಗಾವಿಯ ಸಮೀಪದಲ್ಲಿರುವ ಐನಾಪುರಗ್ರಾಮದವರಾದ ಪಂ. ಗೋಪಾಲಾಚಾರ್ಯರು ಶ್ರೀ ಸತ್ಯಧ್ಯಾನತೀರ್ಥರಲ್ಲಿ ಶ್ರೀಮನ್ಯಾಯಸುಧಾ ಓದಿದ ವಿದ್ವಾಂಸರ ಪರಂಪರೆಗೆ ಸೇರಿದವರು. ಉಡುಪಿಯ ಪೇಜಾವರಮಠದ ಶ್ರೀಗಳಿಗೆ ಪಾಠ ಹೇಳಿದ ಶ್ರೀ ವಿದ್ಯಾಮಾನ್ಯತೀರ್ಥರೂ ಶ್ರೀ ಸತ್ಯಧ್ಯಾನತೀರ್ಥರ ಶಿಷ್ಯರಾಗಿದ್ದರು. ಪಂ. ಗೋಪಾಲಾಚಾರ್ಯರಲ್ಲಿ ಇನ್ನೊಂದು ವೈಶಿಷ್ಟ್ಯವಿತ್ತು. ಅವರು ಮುಂಬೈ ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಎಂ.ಎ.ಪದವಿಯನ್ನೂ ಪಡೆದಿದ್ದರು. ಅವರಿಗೆ ಸುಲಭವಾಗಿ ಯಾವುದೇ ಕಾಲೇಜಿನಲ್ಲಿ ಪ್ರಾಧ್ಯಾಪಕ ಕೆಲಸ ದೊರೆಯಬಹುದಾಗಿತ್ತು. ಆದರೆ ಅವರಿಗೆ ನೌಕರಿ-ಚಾಕರಿ ಮಾಡುವ ಮನಸ್ಸಿರಲಿಲ್ಲ. ತಾವು ಒಂದು ಗುರುಕುಲವನ್ನು ಸ್ಥಾಪಿಸಿಬೇಕು, ಅಲ್ಲಿ ವಿದ್ಯಾರ್ಥಿಗಳಿಗೆ ವೈದಿಕ ವಿದ್ಯೆಯನ್ನು ಉಚಿತವಾಗಿ ಕೊಡಬೇಕು ಎಂಬ ಮಹದಾಸೆಯಿತ್ತು- ಇದೇ ಅವರ ಜೀವನದ ಗುರಿಯಾಗಿತ್ತು. ಅವರು ಭಾರತದ ಹೆಬ್ಬಾಗಿಲು ಎಂದೇ ಪ್ರಸಿದ್ಧವಾದ ಮುಂಬಾಪುರಿಯನ್ನೇ ಆರಿಸಿಕೊಂಡರು. ತಮ್ಮ ಸ್ವರೂಪೋದ್ಧಾರಕರಾದ ಸತ್ಯಧ್ಯಾನತೀರ್ಥರನ್ನು ಕಂಡು ತಮ್ಮ ಜೀವನದ ಧ್ಯೇಯದ ಬಗ್ಗೆ ಹೇಳಿದಾಗ ಗುರುಗಳು ಅವರಿಗೆ ಮಂತ್ರಾಕ್ಷತೆ ಕೊಟ್ಟು ಆಶೀರ್ವದಿಸಿದರು. ಏಳು ವಿದ್ಯಾರ್ಥಿಗಳನ್ನು ಕರೆದುಕೊಂಡು ಮುಂಬೈಗೆ ಬಂದರು. ಅದರ ಫಲವಾಗಿ `ವಾಣೀವಿಹಾರ ವಿದ್ಯಾಲಯ 1936ರಲ್ಲಿ ಪ್ರಾರಂಭವಾಯ್ತು, ಆಗ ಆಚಾರ್ಯರಿಗೆ 27 ವರ್ಷ. ಅವರ ಧರ್ಮಪತ್ನಿ ವಿದ್ಯಾರ್ಥಿಗಳಿಗೆಲ್ಲ ತಾಯಿಯ ಮಮತೆ ತೋರಿದರು.

1956ರಲ್ಲಿ ತಮ್ಮ ಗುರುಗಳ ಹೆಸರಿನಲ್ಲಿ ಶ್ರೀ ಸತ್ಯಧ್ಯಾನ ವಿದ್ಯಾಪೀಠವನ್ನು ಪ್ರಾರಂಭಿಸಿದರು. ಈ ವರ್ಷ ಶ್ರೀ ಸತ್ಯಧ್ಯಾನ ವಿದ್ಯಾಪೀಠದ ಸುವರ್ಣಮಹೋತ್ಸವವನ್ನೂ ಆಚರಿಸುತ್ತಿದ್ದಾರೆ, ಜೊತೆಗೆ ಪಂ. ಗೋಪಾಲಾಚಾರ್ಯರ ಜನ್ಮಶತಮಾನೋತ್ಸವವೂ ಇದೆ (1909-1984). ಇಂದು ಎರಡು ನೂರರಷ್ಟು ಉದ್ಯಾರ್ಥಿಗಳು ಇಲ್ಲಿ ಉಚಿತವಾಗಿ ಸಂಸ್ಕೃತ ಹಾಗೂ ವೇದಾಂತ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಮಾತುಂಗಾದ ಜಾಗೆ ಚಿಕ್ಕದಾಯಿತು ಎಂದು ಗೋಪಾಲಾಚಾರ್ಯರು ಮುಳುಂದ ಉಪನಗರದಲ್ಲಿ ದೊಡ್ಡ ಕಟ್ಟಡವನ್ನು ರೂಪಿಸಿ ಅಲ್ಲಿ ನವವೃಂದವನವನ್ನು ಸ್ಥಾಪಿಸಿದ್ದರು. ಅವರ ಚಿರಂಜೀವರಾದ ಪಂ. ಮಾಹುಲಿ ವಿದ್ಯಾಸಿಂಹಾಚಾರ್ಯರು ಆ ಕಟ್ಟಡಕ್ಕೆ ಹೊಸರೂಪ, ವಿರಾಟರೂಪ ಕೊಟ್ಟಿದ್ದಾರೆ ಮತ್ತು ಶ್ರೀವೇಂಕಟೇಶ್ವರ ದೇವಾಲಯವನ್ನೂ ಸ್ಥಾಪಿಸಿದ್ದಾರೆ. ಅದರ ಪ್ರಾರಂಭೋತ್ಸವ ಉತ್ತರಾದಿಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥದಿಂದ ಜರುಗಿತು(1-5-2009). ಶ್ರೀಸತ್ಯಾತ್ಮರು ಸತ್ಯಧ್ಯಾನ ವಿದ್ಯಾಪೀಠದ ವಿದ್ಯಾರ್ಥಿಯಾಗಿದ್ದರು. ಪಂ. ಗೋಪಾಲಾಚಾರ್ಯರು ಶ್ರೀಗಳ ಪೂರ್ವಶ್ರಮದ ಮಾತಾಮಹರು.

1960ರಲ್ಲಿ ಮಾಟುಂಗಾದ ಖಾಲ್ಸಾ ಕಾಲೇಜಿನ ಕನ್ನಡ ಪ್ರಾಧ್ಯಾಪಕನಾಗಿ ನೌಕರಿಗೆ ಸೇರಿದಾಗ ನಾನು ಮುಂಬೈಯಲ್ಲಿ ಮೊದಲು ಕಂಡ ಮಹಾಚೇತನೆರೆಂದರೆ ಪಂ. ಗೋಪಾಲಚಾರ್ಯರು. ಅವರ ವಿಲಕ್ಷಣ ಪ್ರತಿಭೆಯ ಅಯಾಸ್ಕಾಂತದ ಪ್ರಭಾವಕ್ಕೆ ಸಿಲುಕಿದೆ, ಅವರ ಶಿಷ್ಯತ್ವವಹಿಸಿದೆ, ಅವರ ಕೃಪೆಯಿಂದ, ಆಶೀರ್ವಾದದಿಂದ ಪುನೀತನಾದೆ. ನನಗೆ ಕಾಲೇಜಿನ ಹಾಸ್ಟೇಲಿನಲ್ಲಿ ವಾಸಕ್ಕೆ ಅನುಕೂಲತೆ ಒದಗಿತ್ತು. ಪ್ರತಿನಿತ್ಯ ಆಚಾರ್ಯರ ಮನೆಗೆ ಬರುತ್ತಿದ್ದೆ, ಪ್ರವಚನಗಳನ್ನು ಕೇಳುತ್ತಿದ್ದೆ. ಪ್ರತಿ ರವಿವಾರ ಪೋದಾರ್ ಕಾಲೇಜಿನಲ್ಲಿ ನಡೆಯುತ್ತಿದ್ದ ಅವರ ಇಂಗ್ಲಿಷ್ ಪ್ರವಚನಗಳನ್ನು ಕೇಳುವ ಭಾಗ್ಯ ನನಗೆ ಲಭಿಸಿತು. ಆ ದಿನಗಳಲ್ಲಿ ಕನ್ನಡದಲ್ಲಿ ಯಾವುದೇ ಸಭೆ ನಡೆದರೂ ಹೆಚ್ಚಾಗಿ ಪಂ.ಗೋಪಾಲಚಾರ್ಯರೇ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುತ್ತಿದ್ದರು. ಅವರಿಗೆ ಕನ್ನಡ ಸಾಹಿತ್ಯದಲ್ಲಿಯೂ ಅಭಿರುಚಿಯಿತ್ತು. ವಿಶೇಷವಾಗಿ ದಾಸಸಾಹಿತ್ಯದ ಮೇಲೆ ಅವರು ಅಧಿಕಾರವಾಣಿಯಿಂದ ಮಾತಾಡುತ್ತಿದ್ದರು.

ಅವರದು ಮುಕ್ತ ಮನಸ್ಸು, ವಿಶಾಲ ಮನೋಭಾವ. ಅವರು ಕಟ್ಟಾ ಮಾಧ್ವರಾದರೂ ಅದ್ವೈತ, ವಿಶಿಷ್ಟಾದ್ವೈತ, ಹಾಗೂ ಇತರ ಸಂಪ್ರದಾಯದ (ಸ್ವಾಮಿನಾರಾಯಣ ಮುಂ.) ಪಂಡಿತರೂ ಅವರ ಬಳಿ ವೇದಾಂತದ ಪಾಠಹೇಳಿಸಿಕೊಳ್ಳಲು ಬರುತ್ತಿದ್ದರು. (ಜಸ್ಟಿಸ್ ಶ್ರೀಕೃಷ್ಣ ಅವರಲ್ಲಿ ಪಾಠ ಹೇಳಿಸಿಕೊಂಡಿದ್ದಾರೆ.) ವರಕವಿ ಬೇಂದ್ರೆ ಹಾಗೂ ಗೋಕಾಕರನ್ನು ಖಾಲ್ಸಾ ಕಾಲೇಜಿಗೆ ಕರೆಸಿದಾಗ, ಪಂ.ಗೋಪಾಲಚಾರ್ಯರು ತಮ್ಮ ಮನೆಗೂ ಅವರನ್ನು ಕರೆಸಿಕೊಂಡು ಗೌರವಿಸಿದರು. ಅವರು ಗೋಪಾಲಚಾರ್ಯರ ಬೃಹತ್ ಲೈಬ್ರರಿಯನ್ನು ಕಂಡು ಕೊಂಡಾಡಿದ್ದರು. ಪಂಡಿತರ ವಾಚನಾಭಿರುಚಿ ತತ್ವಜ್ಞಾನಕ್ಕೇ ಸೀಮಿತವಾಗಿರಲಿಲ್ಲ. ಪೌರ್ವತ್ಯ ಹಾಗೂ ಪಾಶ್ಚಿಮಾತ್ಯ ವೇದಾಂತದ ಗ್ರಂಥಗಳಲ್ಲದೆ, ವಿಜ್ಞಾನದ ಗ್ರಂಥಗಳೂ ಇಲ್ಲಿವೆ. ಅವರಿಗೆ ಹೋಮಿಯೋಪತಿಯಲ್ಲಿ ವಿಶೇಷ ಆಸಕ್ತಿ ಇತ್ತು. ಕನ್ನಡ, ಮರಾಠಿ, ಇಂಗ್ಲಿಷ್, ಹಿಂದೀ ಸಾಹಿತ್ಯದ ಗ್ರಂಥಗಳೂ, ವಿಶ್ವಕೋಶಗಳೂ ಇವೆ. ತಮ್ಮ ವಿದ್ಯಾರ್ಥಿಗಳಿಗೆ ಹಿಂದಿ ಹಾಗೂ ಸಂಸ್ಕೃತದಲ್ಲಿ ಬನಾರಸ್ ಮೊದಲಾದ ವಿಶ್ವವಿದ್ಯಾಲಯಗಳಿಂದ ಎಂ.ಎ.ಪದವಿ ಗಳಿಸಲು ಪ್ರೋತ್ಸಾಹಿಸುತ್ತಿದ್ದರು. ಅವರ ವಿದ್ಯಾರ್ಥಿಗಳು ಭಾರತದ ಎಲ್ಲ ಪ್ರಮುಖ ಪಟ್ಟಣಗಳಲ್ಲಿ ಪಾಠಪ್ರವಚನ ನಡೆಸಿ ಸಂಸ್ಕೃತ ಹಾಗೂ ಸಂಸ್ಕೃತಿಯ ಪ್ರಚಾರದಲ್ಲಿ ತೊಡಗಿರುವುದು ಅಭಿಮಾನದ ಸಂಗತಿ.

ಮುಂಬೈಯಲ್ಲಿ ಇಂದು ಮನೆ ಪಡೆಯುವುದು ಎಷ್ಟು ಕಷ್ಟದ್ದೋ ಅಂದು ಕೂಡ ಕಷ್ಟದ್ದೇ ಆಗಿತ್ತು. ನಾನು 1964 ಮೇ 31 ವಿವಾಹಿತನಾಗಿ ಮುಂಬೈಗೆ ರಜೆ ಮುಗಿಸಿ ಧಾರವಾಡದಿಂದ ಮುಂಬೈಗೆ ಮರಳಿ ಬರುವವನಿದ್ದೆ. ಮೇ ತಿಂಗಳ ಪ್ರಾರಂಭಕ್ಕೆ ಪಂ. ಗೋಪಾಲಚಾರ್ಯರಿಗೆ ಒಂದು ಪತ್ರ ಬರೆದು ನನಗೆ ಒಂದು ಕೋಣೆಯ ಮನೆ ಬಾಡಿಗೆಗೆ ಕೊಡಿಸಲು ಸಹಾಯ ಮಾಡಲು ಕೇಳಿದ್ದೆ. ಅವರು ಆ ದಿಶೆಯಲ್ಲಿ ಪ್ರಯತ್ನಿಸಿ ನನಗೊಂದು ಪತ್ರ ಬರೆದಿದ್ದರು. ಪತ್ರ ಕನ್ನಡದಲ್ಲಿದೆ, ಅವರ ಹಸ್ತಾಕ್ಷರ ದೇವನಾಗರಿಯಲ್ಲಿದೆ. ನನಗೆ ಬರೆದ ವಿಳಾಸ ಇಂಗ್ಲೀಷಿನಲ್ಲಿದೆ. ಗೋಪಾಲಾಚಾರ್ಯರ ಹಸ್ತಾಕ್ಷರಗಳ ಅಪೂರ್ವ ದಾಖಲೆ ಅದರಲ್ಲಿದೆ. ಅವರ ಒಲುಮೆ, ಕಿರಿಯರ ಬಗ್ಗೆ ಇರುವ ಕಾಳಜಿ ಅನನ್ಯ. ಅವರ ವಿದ್ವತ್ತು, ಅವರ ತಪಸ್ಸು, ವಿದ್ಯಾದಾನದ ದಾಹ. ಲೋಕ-ವ್ಯವಹಾರ-ಸಂಪರ್ಕ ಚತುರತೆ, ಅಮೋಘವಾಗಿತ್ತು. ಅದರ ಫಲವೇ ಮುಳುಂದದಲ್ಲಿ ತಲೆ ಎತ್ತಿ ನಿಂತಿರುವ ಸತ್ಯಧ್ಯಾನ ವಿದ್ಯಾಪೀಠ.

ವಾಣೀವಿಹಾರ ವಿದ್ಯಾಲಯದ ಬೆಳ್ಳಿಹಬ್ಬದ ಸಂದರ್ಭದಲ್ಲಿ ನಾನು ಗೋಪಾಲಾಚಾರ್ಯರ ಮೇಲೆ ಒಂದು ಕವನ ಬರೆದಿದ್ದೆ(1962ರಲ್ಲಿ). ಅದನ್ನಿಲ್ಲಿ ಉದ್ಧರಿಸುವೆ.

ನಾವು-ನೀವು
(ಪಂ. ಗೋಪಾಲಾಚಾರ್ಯರನ್ನು ಕುರಿತು)
ಆನಂದ-ತೀರ್ಥದಲಿ ಮಿಂದವರು ನೀವು
ವಿಷಯದೀ ತಾಪದಲಿ ನೊಂದವರು ನಾವು
ವೇದ-ಪಾರಂಗತರು ಜ್ಞಾನ-ನಿಧಿ ನೀವು
ತಮಸಿನಲ್ಲಿಯೆ ಕೊಳೆವ ಪಾಮರರು ನಾವು
**
ಮೇರೆಮೀರದೆ ಇರುವ ವಾರಿಧಿಯು ನೀವು
ಅರ್ಧಬಟ್ಟಲದಲ್ಲೆ ತುಳುಕಿದೆವು ನಾವು
ಬಾನಂಚಿಗೂ ಕೈಯ ಚಾಚಿದಿರಿ ನೀವು
ನೆಲದ ಮೇಲೆಯೆ ಕುಳಿತು ಕುಣಿದೆವಿದೊ ನಾವು
**
ಕೋಗಿಲೆಯು ಹಾಡಿದೊಡೆ ಮಧುಮಾಸ ಬಂತು
ಯೋಗಿಜನರಿದ್ದ ನೆಲ ಆಶ್ರಮವ ತಂತು
ತಾಯಿಜೇನಿದ್ದೆಡೆಗೆ ಮಧುಕರದ ಗುಂಪು
ನಿಮ್ಮ ಮನೆ ಜೀವಿಗಳಿಗೀಯುತಿದೆ ತಂಪು.

ಪಂ. ಮಾಹುಲಿಗೋಪಾಲಾಚಾರ್ಯರು `ಸಂಧ್ಯಾರಹಸ್ಯ ಎಂಬ ಪುಸ್ತಕವನ್ನು ಕನ್ನಡದಲ್ಲಿ ಬರೆದಿದ್ದಾರೆ. ತಮ್ಮ ಗುರುಗಳಾಗಿದ್ದ ಶ್ರೀ ಸತ್ಯಧ್ಯಾನತೀರ್ಥರ ಬಗ್ಗೆ ಒಂದು ಪುಸ್ತಕವನ್ನು ಇಂಗ್ಲೀಷಿನಲ್ಲಿ ಬರೆದಿದ್ದಾರೆ. ನೂರಾರು ಬಿಡಿ ಲೇಖನಗಳನ್ನು ಇಂಗ್ಲೀಷಿನಲ್ಲಿ ಹಾಗೂ ಕನ್ನಡದಲ್ಲಿ ಬರೆದಿದ್ದಾರೆ. ಅವುಗಳನ್ನೆಲ್ಲ ಒಂದುಗೂಡಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸುವುದು ಅವಶ್ಯಕವಾಗಿದೆ. ಅವರ ಅತ್ಯಂತ ಮಹತ್ವದ ಕಾಣಿಕೆ ಎಂದರೆ The Heart of Rigveda (pages 464, Somaiya Paublications,1971) ಎಂಬ ಉದ್ಗ್ರಂಥ. ಇದು ಇಂದು ಲಭ್ಯವಾಗಿಲ್ಲ. ಇದರ ಮರುಮುದ್ರಣದ ಅವಶ್ಯಕತೆ ಇದೆ. ಈ ಗ್ರಂಥವನ್ನು ಬರೆಯಲು ಮುಂಬೈಯ ಪ್ರಸಿದ್ಧ ಉದ್ಯಮಿ ಆರ್.ಡಿ.ಚಾರ್ ಎಂಬವರು ಪ್ರೇರಣೆ ನೀಡಿದ್ದರು. ಅನೇಕ ವಿದೇಶೀಯ ವಿದ್ವಾಂಸರು ಋಗ್ವೇದವನ್ನು ಆಂಗ್ಲಭಾಷೆಗೆ ಅನುವಾದಿಸಿದ್ದಾರೆ. ಋಗ್ವೇದದ ಹತ್ತು ಮಂಡಲಗಳಿಂದ ನೂರು ಮಂತ್ರಗಳನ್ನು ಆಯ್ದು ಅವುಗಳ ಸರಿಯಾದ ದೋಷರಹಿತ ಆಂಗ್ಲ ಅನುವಾದ ಪಂ ಗೋಪಾಲಾಚಾರ್ಯರು ನೀಡಿದ್ದಾರೆ. ವಿಲ್ಸನ್, ಗ್ರಿಫಿತ್, ಮೆಕ್ಡೊನೆಲ್, ಒಲ್ಡೆನ್‌ಬರ್ಗ ಮುಂತಾದವರ ಆಂಗ್ಲ ಅನುವಾದಗಳನ್ನು ತುಲನೆಗಾಗಿ ನೀಡಿದ್ದಾರೆ. ವೇದಗಳ ಬಗ್ಗೆ ಯುರೋಪಿಯನ್ ವಿದ್ವಾಂಸರ ಮತವೇನಿತ್ತು ಎಂಬ ವಿಚಾರವಾಗಿ ಅಭ್ಯಾಸಪೂರ್ಣ ಅನುಬಂಧವನ್ನೂ ಬರೆದಿದ್ದಾರೆ.