ಕರ್ನಾಟಕ">ಕರ್ನಾಟಕ ರಾಜ್ಯವು ಹಲವಾರು ವಿಷಯಗಳಿಗೆ ಪ್ರಸಿದ್ಧವಾಗಿದೆ. ಪ್ರಕೃತಿ ಸೌಂದರ್ಯ ಅದರಲ್ಲಿ ಬಹು ಪ್ರಮುಖವಾದುದು. ಅದರಲ್ಲೂ ಜಲಪಾತಗಳ ವಿಷಯದಲ್ಲಿ ಕರ್ನಾಟಕ ಭಾರತದಲ್ಲಿಯೇ ಅಗ್ರಸ್ಥಾನದಲ್ಲಿದೆ ಎಂದು ತಿಳಿಯಲಾಗಿದೆ. ತನ್ನಲ್ಲಿರುವ ಹಲವಾರು ನಯನ ಮನೋಹರವಾದ ಜಲಪಾತಗಳಿಂದಾಗಿ ಕರ್ನಾಟಕವು ಜಗತ್ಪ್ರಸಿದ್ಧಿಯನ್ನು ಪಡೆದಿದೆ. ಕರ್ನಾಟಕ">ಕರ್ನಾಟಕದ ವಿವಿದ ಪ್ರದೇಶಗಳಲ್ಲಿ ಜಲಪಾತಗಳನ್ನು ಅಬ್ಬಿ, ಅಬ್ಬೆ, ಹೆಬ್ಬೆ, ದಬ್ಬೆ, ಜೋಗ ಎಂಬ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ.
ಕರ್ನಾಟಕ">ಕರ್ನಾಟಕ ರಾಜ್ಯದ ಬಹುಪಾಲು ಜಲಪಾತಗಳು ಕಂಡು ಬರುವುದು ಪಶ್ಚಿಮ ಘಟ್ಟ" class="mw-redirect">ಪಶ್ಚಿಮ ಘಟ್ಟಗಳ ಮಡಿಲಿನಲ್ಲಿ. ಕೊಡಗು">ಕೊಡಗಿನಿಂದ ಹಿಡಿದು ಉತ್ತರ ಕನ್ನಡ">ಉತ್ತರ ಕನ್ನಡದ ಅಂಚಿನವರೆಗೆ ಹರಡಿರುವ ಪಶ್ಚಿಮ ಘಟ್ಟಗಳು ದೊಡ್ಡ ಹಾಗೂ ಚಿಕ್ಕ ಪುಟ್ಟ ಜಲಪಾತಗಳನ್ನೂ ಸೇರಿ ಏನಿಲ್ಲವೆಂದರೂ ಸುಮಾರು ೫೦೦ ರ ಆಸು ಪಾಸು ಜಲಪಾತಗಳಿವೆ ಎಂದು ಅಂದಾಜು ಮಾಡಲಾಗಿದೆ.
ಅಬ್ಬಿ ಜಲಪಾತ
ಅಬ್ಬಿ ಜಲಪಾತವು ಕೊಡಗು">ಕೊಡಗು ಜಿಲ್ಲೆಯ ಮುಖ್ಯ ಪಟ್ಟಣವಾದ ಮಡಿಕೇರಿಯಿಂದ ಕೇವಲ ೫ ಕಿ.ಮೀ. ದೂರದಲ್ಲಿದೆ. ಮಡಿಕೇರಿಯವರೆಗೆ ಬಸ್ ಸೌಕರ್ಯವಿದ್ದು ಅಲ್ಲಿಂದ ೫ ಕಿ.ಮೀ. ಯಾವುದೇ ಸ್ಥಳೀಯ ಖಾಸಗಿ ವಾಹನವನ್ನು ಹಿಡಿದು ಹೋಗಬಹುದು.ನಂತರ ಸುಮಾರು ೫೦೦ ಮೀ ನಷ್ಟು ಕಾಫಿ ತೋಟದ ಮಧ್ಯೆ ನಡೆದುಕೊಂಡು ಹೋದರೆ ಈ ಸುಂದರವಾದ ಜಲಪಾತ ಕಾಣಸಿಗುತ್ತದೆ. ಮಳೆಗಾಲದ ನಂತರದ ಅವಧಿಯಲ್ಲಿ ಹೋದರೆ ೧೦೭ ಅಡಿ ಎತ್ತರದಿಂದ ಮೈದುಂಬಿಕೊಂಡು ಧುಮುಕುವ ಜಲಪಾತದ ವೈಭವವನ್ನು ಸವಿಯಬಹುದು.
- ಸ್ಥಳ: ಮಡಿಕೇರಿ">ಮಡಿಕೇರಿ, ಕೊಡಗು">ಕೊಡಗು ಜಿಲ್ಲೆ.
- ದೂರ: ಬೆಂಗಳೂರು">ಬೆಂಗಳೂರಿನಿಂದ ಸುಮಾರು ೨೫೦ ಕಿ.ಮೀ. ಮಂಗಳೂರು">ಮಂಗಳೂರಿನಿಂದ ೧೨೦ ಕಿ.ಮೀ.
- ಸಮೀಪದ ಪಟ್ಟಣ: ಮಡಿಕೇರಿ">ಮಡಿಕೇರಿ. ಇಲ್ಲಿ ವಸತಿಗೃಹಗಳು, ಪೆಟ್ರೋಲ್ ಬಂಕುಗಳು ಮತ್ತಿತರ ಪ್ರಮುಖ ವ್ಯವಸ್ಥೆಗಳು ಲಭ್ಯ.
- ಸಮೀಪದ ಪ್ರಮುಖ ಆಕರ್ಷಣೆಗಳು: ಮಡಿಕೇರಿ">ಮಡಿಕೇರಿ,ತಲಕಾವೇರಿ">ತಲಕಾವೇರಿ, ಇರುಪ್ಪು ಜಲಪಾತ, ಭಾಗಮಂಡಲ (ಪುಟವು ಇನ್ನೂ ಸೃಷ್ಟಿತವಾಗಿಲ್ಲ)">ಭಾಗಮಂಡಲ, ಬೈಲುಕುಪ್ಪೆ (ಪುಟವು ಇನ್ನೂ ಸೃಷ್ಟಿತವಾಗಿಲ್ಲ)">ಬೈಲುಕುಪ್ಪೆ
ಸಾತೊಡ್ಡಿ ಜಲಪಾತ
- ಸ್ಥಳ: ಯಲ್ಲಾಪುರ">ಯಲ್ಲಾಪುರ ತಾಲೂಕು, ಉತ್ತರ ಕನ್ನಡ">ಉತ್ತರ ಕನ್ನಡ ಜಿಲ್ಲೆ.
- ದೂರ: ಬೆಂಗಳೂರು">ಬೆಂಗಳೂರಿನಿಂದ ಸುಮಾರು ೪೫೦ ಕಿ.ಮೀ. ಹುಬ್ಬಳ್ಳಿ">ಹುಬ್ಬಳ್ಳಿಯಿಂದ ಸುಮಾರು ೬೦ ಕಿ.ಮೀ.
- ಸಮೀಪದ ಪಟ್ಟಣಗಳು: ಯಲ್ಲಾಪುರ ಮತ್ತು ಹುಬ್ಬಳ್ಳಿ">ಹುಬ್ಬಳ್ಳಿ
- ಸಮೀಪದ ಪ್ರಮುಖ ಆಕರ್ಷಣೆಗಳು: ಮಾಗೋಡು ಜಲಪಾತ, ಕಾರವಾರ">ಕಾರವಾರ, ದಾಂಡೇಲಿ ಅಭಯಾರಣ್ಯ (ಪುಟವು ಇನ್ನೂ ಸೃಷ್ಟಿತವಾಗಿಲ್ಲ)">ದಾಂಡೇಲಿ ಅಭಯಾರಣ್ಯ, ಶಿರಸಿ">ಶಿರಸಿ ಮಾರಿಕಾಂಬೆ ದೇವಾಲಯ
ಜೋಗ ಜಲಪಾತ" class="mw-redirect">ಜೋಗ ಜಲಪಾತ
ಜೋಗ ಅಥವ ಗೇರುಸೊಪ್ಪ ಜಲಪಾತ ಪ್ರಪಂಚದ ಪ್ರಸಿದ್ಧ ಜಲಪಾತಗಳಲ್ಲೊಂದು. ಶಿವಮೊಗ್ಗ">ಶಿವಮೊಗ್ಗ ಮತ್ತು ಉತ್ತರ ಕನ್ನಡ">ಉತ್ತರ ಕನ್ನಡ ಜಿಲ್ಲೆಗಳ ಗಡಿಯಲ್ಲಿರುವ ಜೋಗ ಭಾರತ">ಭಾರತದ ಅತಿ ಎತ್ತರದ ಜಲಪಾತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸುಮಾರು ೨೯೨ ಮೀಟರ್ ಎತ್ತರದಿಂದ ಶರಾವತಿ">ಶರಾವತಿ ನದಿಯು ರಾಜಾ, ರೋರರ್, ರಾಕೆಟ್ ಮತ್ತು ರಾಣಿ ಎಂಬ ನಾಲ್ಕು ಸೀಳುಗಲಾಗಿ ಇಲ್ಲಿ ಧುಮುಕುತ್ತೆದೆ.
- ಸ್ಥಳ: ಶಿವಮೊಗ್ಗ">ಶಿವಮೊಗ್ಗ ಜಿಲ್ಲೆಯ ಸಾಗರ">ಸಾಗರ ತಾಲೂಕು.
- ದೂರ: ಬೆಂಗಳೂರು">ಬೆಂಗಳೂರಿನಿಂದ ಸುಮಾರು ೪೦೦ ಕಿ.ಮೀ. ಶಿವಮೊಗ್ಗ">ಶಿವಮೊಗ್ಗದಿಂದ ಸುಮಾರು ೧೨೦ ಕಿ.ಮೀ.
- ಸಮೀಪದ ಪಟ್ಟಣಗಳು: ಸಾಗರ">ಸಾಗರ (೩೦ ಕಿ.ಮೀ), ಹೊನ್ನಾವರ">ಹೊನ್ನಾವರ (೬೦ ಕಿ.ಮೀ)
- ಸಮೀಪದ ಪ್ರಮುಖ ಆಕರ್ಷಣೆಗಳು: ಲಿಂಗನಮಕ್ಕಿ ಅಣೆಕಟ್ಟು, ಗೋಕರ್ಣ">ಗೋಕರ್ಣ, ಗೇರುಸೊಪ್ಪೆ, ಮುರ್ಡೆಶ್ವರ (ಪುಟವು ಇನ್ನೂ ಸೃಷ್ಟಿತವಾಗಿಲ್ಲ)">ಮುರ್ಡೆಶ್ವರ,ಕೊಲ್ಲೂರು (ಪುಟವು ಇನ್ನೂ ಸೃಷ್ಟಿತವಾಗಿಲ್ಲ)">ಕೊಲ್ಲೂರು, ಕೆಳದಿ, ಇಕ್ಕೇರಿ
ಬೈಂದೂರು">ಬೈಂದೂರು ಕೋಸಳ್ಳಿ ಜಲಪಾತ
ಕೋಸಳ್ಳಿ ಜಲಪಾತವು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರಿನಿಂದ ಸುಮಾರು 11 ಕಿ.ಮೀ ದೂರದಲ್ಲಿದೆ. ಬೈಂದೂರಿನಿಂದ ಶಿರೂರು ಮಾರ್ಗವಾಗಿ ಸುಮಾರು 7 ರಿಂದ 8 ಕಿ.ಮೀ ದೂರವಿರುವ ತೂದಳ್ಳಿಗೆ ಬಂದು ಅಲ್ಲಿಂದ ಸುಮಾರು 3 ಕಿ.ಮೀ ಕಾಡುಮಾರ್ಗದಲ್ಲಿ ನಡೆದು ಹೋದರೆ ಸಿಗುವುದೇ ಕೋಸಳ್ಳಿ ಜಲಪಾತ. ಕೋಸಳ್ಳಿ ಜಲಪಾತವು 3-5 ಹಂತಗಳಾಗಿ ಧುಮುಕುತ್ತದೆ.
- ಸ್ಥಳ: ಬೈಂದೂರು">ಬೈಂದೂರು, ಕುಂದಾಪುರ">ಕುಂದಾಪುರ ತಾಲೂಕು, ಉಡುಪಿ">ಉಡುಪಿ ಜಿಲ್ಲೆ
- ದೂರ: ಬೆಂಗಳೂರಿನಿಂದ ಸುಮಾರು 480 ಕಿ.ಮೀ. ಮಂಗಳೂರಿನಿಂದ 130 ಕಿ.ಮೀ
- ಮಾರ್ಗ: ಮಂಗಳೂರು - ಗೋವಾ ರಾಷ್ಟ್ರೀಯ ಹೆದ್ದಾರಿ 17
- ಸಮೀಪದ ಪಟ್ಟಣಗಳು: ಭಟ್ಕಳ, ಕುಂದಾಪುರ, ಉಡುಪಿ
- ಸಮೀಪದ ಪ್ರಮುಖ ಆಕರ್ಷಣೆಗಳು: ಕೊಲ್ಲೂರು ಶ್ರೀ ಮುಕಾಂಬಿಕಾ ದೇವಸ್ಥಾನ (27ಕಿ.ಮೀ*), ಮುರ್ಡೇಶ್ವರ (30ಕಿ.ಮೀ*), ಉಡುಪಿ ಶ್ರೀ ಕೃಷ್ಣ ದೇವಸ್ಥಾನ (67ಕಿ.ಮೀ*)ಮರವಂತೆ ಕಡಲ ತೀರ (18ಕಿ.ಮೀ*), (*ಬೈಂದೂರಿನಿಂದ ಇರುವ ದೂರ)
ಕರ್ನಾಟಕದಲ್ಲಿರುವ ಪ್ರಮುಖವಾದ ಜಲಪಾತಗಳು
- ಉಂಚಳ್ಳಿ ಜಲಪಾತ">ಉಂಚಳ್ಳಿ ಜಲಪಾತ ಅಥವ ಲುಷಿಂಗ್ಟನ್ ಜಲಪಾತ
- ಅಬ್ಬೆ ಜಲಪಾತ
- ಇರುಪ್ಪು ಜಲಪಾತ
- ಸುತನಬ್ಬಿ / ಹನುಮನ ಗುಂಡಿ ಜಲಪಾತ
- ಹಿಡ್ಲುಮನೆ / ಹಿತ್ಲುಮನೆ ಜಲಪಾತ
- ಗಗನಚುಕ್ಕಿ ಜಲಪಾತ (ಶಿವನ ಸಮುದ್ರ">ಶಿವನ ಸಮುದ್ರ)
- ಭರಚುಕ್ಕಿ ಜಲಪಾತ (ಶಿವನ ಸಮುದ್ರ">ಶಿವನ ಸಮುದ್ರ)
- ಹೆಬ್ಬೆ ಜಲಪಾತ
- ಅಬ್ಬೆ ಜಲಪಾತ
- ಮಾಗೋಡು ಜಲಪಾತ
- ಸಿರಿಮನೆ ಜಲಪಾತ
- ಬೆಣ್ಣೆ ಹೊಳೆ ಜಲಪಾತ">ಬೆಣ್ಣೆ ಹೊಳೆ ಜಲಪಾತ
- ವಾಟೆ ಹಳ್ಳ ಜಲಪಾತ
- ಬುರುಡೆ ಜಲಪಾತ ಅಥವ ಬುರುಡೆ ಜೋಗ
- ಕಲ್ಹತ್ತಿಗಿರಿ ಜಲಪಾತ
- ವಿಭೂತಿ ಜಲಪಾತ
- ಕೂಡ್ಲು ತೀರ್ಥ ಜಲಪಾತ" class="mw-redirect">ಕೂಡ್ಲು ತೀರ್ಥ ಜಲಪಾತ
- ಜೋಮ್ಲು ತೀರ್ಥ (ಪುಟವು ಇನ್ನೂ ಸೃಷ್ಟಿತವಾಗಿಲ್ಲ)">ಜೋಮ್ಲು ತೀರ್ಥ
- ದಬ್ಬೆ ಜಲಪಾತ
- ಶಿವಗಂಗೆ ಜಲಪಾತ
- ಮುತ್ಯಾಲ ಮಡುವು ಜಲಪಾತ" class="mw-redirect">ಮುತ್ಯಾಲ ಮಡುವು ಜಲಪಾತ ಪರ್ಲ್ ವ್ಯಾಲಿ ಜಲಪಾತ) (ಪುಟವು ಇನ್ನೂ ಸೃಷ್ಟಿತವಾಗಿಲ್ಲ)">(ಪರ್ಲ್ ವ್ಯಾಲಿ ಜಲಪಾತ)
- ಚುಂಚಿ ಜಲಪಾತ">ಚುಂಚಿ ಜಲಪಾತ
- ಆಲೇಖಾನ್ ಜಲಪಾತ">ಆಲೇಖಾನ್ ಜಲಪಾತ
- ಮಾಣಿಕ್ಯಧಾರ ಜಲಪಾತ">ಮಾಣಿಕ್ಯಧಾರ ಜಲಪಾತ
- ಶಾಂತಿ ಜಲಪಾತ">ಶಾಂತಿ ಜಲಪಾತ
- ಮಘೇಬೈಲ್ ಜಲಪಾತ" class="mw-redirect">ಮಘೇಬೈಲ್ ಜಲಪಾತ
- ಬರ್ಕಣ ಜಲಪಾತ">ಬರ್ಕಣ ಜಲಪಾತ
- ಲಾಲ್ಗುಳಿ ಜಲಪಾತ">ಲಾಲ್ಗುಳಿ ಜಲಪಾತ
- ಜೇನುಗಲ್ಲು ಜಲಪಾತ (ಪುಟವು ಇನ್ನೂ ಸೃಷ್ಟಿತವಾಗಿಲ್ಲ)">ಜೇನುಗಲ್ಲು ಜಲಪಾತ
- ಲೈನ್ಕಜೆ ಜಲಪಾತ (ಪುಟವು ಇನ್ನೂ ಸೃಷ್ಟಿತವಾಗಿಲ್ಲ)">ಲೈನ್ಕಜೆ ಜಲಪಾತ
No comments:
Post a Comment