ಗುರ್‌ಗಾಂವ್ ಕನ್ನಡ ಸಂಘ ಮತ್ತು ಕರ್ನಾಟಕ ಸರ್ಕಾರ ವಾರ್ತಾಇಲಾಖೆ ಇವರ ಸಹಯೋಗದಲ್ಲಿ ದಿನಾಂಕ 21-11-2010 ರ ಭಾನುವಾರದಂದು, ಇಲ್ಲಿನ ಸೆಕ್ಟರ್-4 ರ ಬಾಲಭವನದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಬಿ.ಆರ್.ಛಾಯಾರವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಪದ್ಮಪಾಣಿ ನಿರ್ಮಾಪಕರು, ರಾಜೇಂದ್ರಕುಮಾರ್ ಕಟಾರಿಯಾ ಜಿಲ್ಲಾಧಿಕಾರಿಗಳು ಗುರ್‌ಗಾಂವ್, ವಸಂತಶೆಟ್ಟಿ ಬೆಳ್ಳಾರೆ ಉಪಾಧ್ಯಕ್ಷರು ದೆಹಲಿ ಕನ್ನಡ ಸಂಘ, ಮತ್ತು ಗಿರೀಶ್ ಉಪನಿರ್ದೇಶಕರು ವಾರ್ತಾಇಲಾಖೆ ನವದೆಹಲಿ, ಇವರು ಸಹಾ ಆಹ್ವಾನಿತ ಅತಿಥಿಗಳಾಗಿ ಆಗಮಿಸಿದ್ದರು.
ಆನಂದ ಶರ್ಮಾರವರ "ಸರಿಗಮಪ ಕ್ರಿಯೇಷನ್ಸ್" ನ ಸರಿಗಮಪ ಲಿಟ್ಲ್ ಚಾಂಪಿಯನ್ಸ್ ಚಿ.ಅಶ್ವಿನ್ ಶರ್ಮಾ, ಕು. ಅರುಂಧತಿ ಮತ್ತು ಕು. ಹಂಸಿನಿ ಹಾಗೂ ಇವರ ಸಂಪೂರ್ಣ ವಾಧ್ಯವೃಂದ ಆಗಮಿಸಿದ್ದರು. ನಾಡಗೀತೆಯೋದಿಗೆ ಪ್ರಾರಂಭವಾದ ರಾಜ್ಯೋತ್ಸವ ಕಾರ್ಯಕ್ರಮ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರನ್ನು ಕಂಡು ಶ್ರೀಮತಿ ಬಿ.ಆರ್.ಛಾಯಾ ತಮ್ಮ ಭಾಷಣದಲ್ಲಿ, ಹೊರರಾಜ್ಯದಲ್ಲಿ ನಿಮ್ಮ ಕನ್ನಡ ಅಭಿಮಾನಕ್ಕೆ ನನ್ನಿಂದ ಮಾತು ಹೊರ ಹೊಮ್ಮುತ್ತಿಲ್ಲ ಎಂದು ತಿಳಿಸಿದರು.
ಪದ್ಮಪಾಣಿರವರು ಹರ್ಷಚಿತ್ತರಾಗಿ "ಕಲಾವಿದರನ್ನು ಗೌರವಿಸುವ, ಆದರಿಸುವ ಜನ ನಿಜಕ್ಕೂ ಕನ್ನಡ ತಾಯಿಯ ಚಿನ್ನದ ಮಕ್ಕಳು ಎಂದು ಹೇಳಿದರು. ರಾಜೇಂದ್ರಕುಮಾರ್ ಕಟಾರಿಯಾರವರು ತಮ್ಮ ವೃತ್ತಿಯನ್ನು ಕರ್ನಾಟಕದಲ್ಲಿ ಪ್ರಾರಂಭಿಸಿದ್ದರು. ಆಗ ನಡೆದ ಘಟನೆಗಳನ್ನು ಮೆಲುಕು ಹಾಕಿದರು.
ಅಧ್ಯಕ್ಷೀಯ ಭಾಷಣದಲ್ಲಿ ಸಾಯಿಪ್ರಸಾದ್‌ರವರು ಸರ್ವರಿಗೂ ಅಭಿನಂದನೆ ವ್ಯಕ್ತಪಡಿಸಿದರು. ಆನಂತರ ನಮ್ಮನ್ನಗಲಿದ ಶ್ರೀಮತಿ ಜಯಶ್ರೀ, ಶ್ರೀನಿವಾಸ್ ಮತ್ತು ಲಕ್ಷ್ಮಿ ದಂಪತಿಗಳಿಗೆ ಶ್ರದ್ಧಾಂಜಲಿ ವ್ಯಕ್ತಪಡಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕು.ನವನೀಶಾ, ಕು.ಅಬೀಙ್ಞ ಮತ್ತು ಕು.ಹಂಸಿನಿ ನೃತ್ಯ ರೂಪಕ ಪ್ರದರ್ಶಿಸಿದರು. ಶ್ರೀಮತಿ ಬಿ.ಆರ್.ಛಾಯಾರವರ ಗಾಯನದಿಂದ ಕನ್ನಡಿಗರು ಪುಳಕಿತರಾದರು, ಪುಟಾಣಿ ಮಕ್ಕಳಾದ ಚಿ.ಅಶ್ವಿನ್, ಕು.ಅರುಂಧತಿ ಮತ್ತು ಕು.ಹಂಸಿನಿ ಭಾವಗೀತೆ, ಜನಪದಗೀತೆ, ದೇಶಭಕ್ತಿಗೀತೆ ಮತ್ತು ಚಲನಚಿತ್ರಗೀತೆಗಳನ್ನು ತನ್ಮಯವಾಗಿ ಹಾಡಿದರು.
ವಸಂತಶೆಟ್ಟಿ ಬೆಳ್ಳಾರೆಯವರು ದಿವಂಗತ ಜಯಶ್ರೀ ಅವರೊಂದಿಗಿನ ಒಡನಾಟವನ್ನು ಹಂಚಿಕೊಂಡರು. ಶ್ರೀ ಗಿರೀಶರವರು ಮಾತಾಡಿ ಭವಿಷ್ಯದಲ್ಲಿ ಇನ್ನೂ ಅನೇಕ ಕಾರ್ಯಕ್ರಮಗಳನ್ನು ರೂಪಿಸುವ ಬಗ್ಗೆ ಭರವಸೆ ವ್ಯಕ್ತಪಡಿಸಿದರು.
ಮಧ್ಯದಲ್ಲಿ ಪದ್ಮಪಾಣಿರವರು ಮಾತುಗಳ ಮುಖಾಂತರ ಪ್ರೇಕ್ಷಕರನ್ನು ನಗೆಯ ಹಬ್ಬದೂಟ ಉಣ ಬಡಿಸುತ್ತಿದ್ದರು. ಒಂದು ಅದ್ಭುತ ಮತ್ತು ಅಚ್ಚುಕಟ್ಟಾದ ರಾಜ್ಯೋತ್ಸವ ಆಚರಣೆ ಎಂದು ಆಗಮಿಸಿದ ಗಣ್ಯರೆಲ್ಲರು ಬಣ್ಣಿಸಿದರು. ಕರ್ನಾಟಕ ಶೈಲಿಯ ಭೋಜನದ ವ್ಯವಸ್ತೆ ಮಾಡಲಾಗಿತ್ತು. ಈ ಬಾರಿ ನಡೆದ ಕರ್ನಾಟಕ ರಾಜ್ಯೋತ್ಸವ ನಿಜಕ್ಕೂ ಅರ್ಥಗರ್ಭಿತವಾಗಿತ್ತು.

No comments:
Post a Comment